RbiSearchHeader

Press escape key to go back

Past Searches

rbi.page.title.1
rbi.page.title.2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78490835
ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ

ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ

ನವೆಂಬರ್ 01, 2016

ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ

ವಾಣಿಜ್ಯ ಬ್ಯಾಂಕುಗಳ ಕಚೇರಿಗಳ ಪಟ್ಟಿಯನ್ನು ಹೊಂದಿರುವ ತನ್ನ ಜಾಲತಾಣದ ಬ್ರ್ಯಾಂಚ್ ಲೊಕೇಟರ್ ಲಿಂಕ್ ನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕರಿಸಿದೆ. ಈ ಲಿಂಕ್ ನಲ್ಲಿ ಜನಗಣತಿ 2011 ಪ್ರಕಾರ ಇರುವ ನೂತನ ಬೇಸ್ ಜನಸಂಖ್ಯೆಯೊಂದಿಗೆ ವಿವಿಧ ಜನಸಂಖ್ಯೆಯ ಆಧಾರದ ಮೇಲೆ ಶಾಖೆ/ ಕಚೇರಿಗಳನ್ನು ವರ್ಗೀಕರಣ ಮಾಡಲಾಗಿದೆ. ಆರ್ ಬಿ ಐ ಸುತ್ತೋಲೆ ಪ್ರಕಾರ (RBI/2016 17/60/DBR.No.BAPD.BC.12/22.01.001/2016-17 dated September 1, 2016) ಜನಗಣತಿ 2011 ರ ಆಧಾರದ ಮೇಲೆ ಕೇಂದ್ರಗಳಲ್ಲಿ ಜನಸಂಖ್ಯೆ ವರ್ಗೀಕರಣ ಮಾಡಿರುವ ಪರಿಣಾಮಕಾರಿ ದಿನಾಂಕ ಸೆಪ್ಟೆಂಬರ್ 1, 2016 ಆಗಿದೆ.

ಬ್ಯಾಂಕ್ ಶಾಖೆಗಳು / ಕಚೇರಿಗಳನ್ನು ಹೊಂದಿರುವ ಕೇಂದ್ರಗಳನ್ನು (ಗ್ರಾಮ / ಪಟ್ಟಣ) ನಾಲ್ಕು ಗುಂಪುಗಳಾಗಿ (ಗ್ರಾಮೀಣ, ಅರೆ ನಗರ, ನಗರ ಮತ್ತು ಮಹಾನಗರ) ಇತ್ತೀಚಿನ (2011) ಜನಗಣತಿ ಮಾಹಿತಿ ಪ್ರಕಾರ ಅದರ ಜನಸಂಖ್ಯೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಬ್ರ್ಯಾಂಚ್ ಲೋಕಟರ್ ನಲ್ಲಿರುವ ಸಂಬಂಧಿತ ಟಿಪ್ಪಣಿಗಳು ಹಾಗೂ ಕೇಂದ್ರಗಳನ್ನು ಗುರುತಿಸುವಲ್ಲಿ ಉಪಯೋಗಿಸಿದ ವಿವರವಾದ ಮಾರ್ಗಸೂಚಿಗಳನ್ನು (/en/web/rbi/-/guidelines-for-identifying-census-centres-2035) ಲಿಂಕ್ ನಲ್ಲಿ ನವೀಕರಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾಹಿತಿಗಳನ್ನು ಬ್ಯಾಂಕುಗಳಿಂದ ಒದಗಿಸಲ್ಪಟ್ಟ ಶಾಖಾ ಅಧಿಕಾರದ ಮೇಲೆ ಇರುವ ಮಾಸ್ಟರ್ ಸುತ್ತೋಲೆ ಮಾಹಿತಿಯ ಆಧಾರದ ಮೇಲೆ ಸ್ಂಗ್ರಹಿಸಿದೆ.

ಅಲ್ಪನಾ ಕಿಲಾವಲಾ
ಮುಖ್ಯ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016/2017/1081

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?