RbiSearchHeader

Press escape key to go back

Past Searches

rbi.page.title.1
rbi.page.title.2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78510351
ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನ ವಿಸ್ತರಣೆ

ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನ ವಿಸ್ತರಣೆ

22, ನವೆಂಬರ್ 2017

ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನ ವಿಸ್ತರಣೆ

ಭಾರತೀಯ ರಿಜರ್ವ್ ಬ್ಯಾಂಕು (ಆದೇಶ DCBS.CO.AID-I/D-21/12.22.218/2017-18 ದಿನಾಂಕ 17, ನವೆಂಬರ್ 2017 ರ ಅನ್ವಯ) ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನಗಳನ್ನು 22 ನವೆಂಬರ್ 2017 ರಿಂದ 31 ಮೇ 2018 ರ ಅವಧಿಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಮೇಲೆ ತಿಳಿಸಿದ ಬ್ಯಾಂಕಿಗೆ ಈ ಹಿಂದೆ ಮೂಲತಃ 22 ಫೆಬ್ರವರಿ 2013 ರಿಂದ 21 ಆಗಸ್ಟ್ 2013 ರ ವರೆಗೆ ನಿರ್ದೇಶನ ನೀಡಲಾಗಿ, ನಂತರ 8 ಬಾರಿ 6 ತಿಂಗಳ ಅವಧಿಗೆ ಹಾಗೂ 3 ಬಾರಿ 3 ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು. ಅಂತಹ ನಿರ್ದೇಶನಗಳು ಕಡೆಯದಾಗಿ 3 ತಿಂಗಳು ಅಂದರೆ 22 ಆಗಸ್ಟ್ 2017 ರಿಂದ 21 ನವೆಂಬರ್ 2017 ರ ಅವಧಿಗೆ ವಿಸ್ತರಿಸಲಾಗಿರುತ್ತವೆ

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ಜೊತೆ ಕಲಂ 56 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆದ ಮಾರ್ಗದರ್ಶನಗಳ ನೀಡಿಕೆ ಬ್ಯಾಂಕಿಂಗ್ ಪರವಾನಗಿ ರದ್ದು ಎಂದು ಅರ್ಥೈಸಿಕೊಳ್ಳಬಾರದು . ಬ್ಯಾಂಕ್ ತನ್ನ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಆಗುವ ತನಕ ನಿರ್ಬಂಧಗಳೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2017-2018/1410

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?