RbiSearchHeader

Press escape key to go back

Past Searches

rbi.page.title.1
rbi.page.title.2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78479915

2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನು ಹಿಂತೆಗೆದುಕೊಳ್ಳಲಾಗುವುದು - ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ

2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನು ಹಿಂತೆಗೆದುಕೊಳ್ಳಲಾಗುವುದು - ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ

ಜನವರಿ 22, 2014

2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನು
ಹಿಂತೆಗೆದುಕೊಳ್ಳಲಾಗುವುದು - ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ

2005 ಕ್ಕೂ ಮುಂಚಿತವಾಗಿ ನೀಡಲಾಗಿರುವ ಎಲ್ಲಾ ಬ್ಯಾಂಕು ನೋಟುಗಳನ್ನು ಮಾರ್ಚ್ 31, 2014 ರ ನಂತರ ಚಲಾವಣೆಯಿಂದ ಹಿಂತೆಗುದುಕೊಳ್ಳಲಾಗುವುದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಸೂಚನೆ ನೀಡಿದೆ. ಏಪ್ರಿಲ್ 1, 2014 ರಿಂದ ಈ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕುಗಳನ್ನು ಸಂಪರ್ಕಿಸಬೇಕು. ಈ ನೋಟುಗಳ ಬದಲಾವಣೆ ಸೌಲಭ್ಯವನ್ನು ಮುಂದೆ ಸೂಚನೆ ನೀಡುವವರೆಗೂ ಬ್ಯಾಂಕುಗಳು ಮುಂದುವರಿಸಲಿವೆ. ಇಂತಹ ನೋಟುಗಳ ಹಿಂಭಾಗದಲ್ಲಿ ನೋಟು ಮುದ್ರಣ ವರ್ಷವನ್ನು ಮುದ್ರಿಸಿಲ್ಲವಾದ್ದರಿಂದ ಈ ನೋಟುಗಳನ್ನು ಗುರುತಿಸುವುದು ಸುಲಭವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (ಕೆಳಗಿನ ಚಿತ್ರವನ್ನು ನೋಡಿ)

2005ಕ್ಕೂ ಮುಂಚಿತವಾಗಿ ನೀಡಲಾದ ನೋಟುಗಳು ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಎಂದರೆ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮತ್ತು ಗ್ರಾಹಕರಲ್ಲದವರಿಗೂ ಸಹಾ ಈ ನೋಟುಗಳನ್ನು ಬದಲಾಯಿಸಿಕೊಡಬೇಕು. ಆದಾಗ್ಯೂ ಜುಲೈ ೦1, 2014 ರಿಂದ ಗ್ರಾಹಕರಲ್ಲದವರು 5೦೦ರೂ ಮತ್ತು 1೦೦೦ರೂ ಮುಖ ಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬೇಕಾದರೆ, ತಮ್ಮ ಗುರುತು ಮತ್ತು ವಿಳಾಸದ ಸಾಕ್ಷ್ಯಾಧಾರವನ್ನು, ಈ ನೋಟುಗಳನ್ನು ಬದಲಾಯಿಸಿಕೊಳ್ಳಬಯಸುವ ಬ್ಯಾಂಕು ಶಾಖೆಯಲ್ಲಿ ನೀಡಬೇಕು.

ಸಾರ್ವಜನಿಕರು ಆತಂಕ ಪಡಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಮನವಿ ಮಾಡಿದೆ. ಈ ಹಿಂತೆಗೆತ ಪ್ರಕ್ರಿಯೆಗೆ ಸಕ್ರಿಯ ಸಹಕಾರ ನೀಡಬೇಕಾಗಿಯೂ ಸಹ ಕೋರಿದೆ.

ಅಜಿತ್ ಪ್ರಸಾದ್
ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2013-2014/1472

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?